ಗುರುವಾರ, ಜೂನ್ 23, 2016

ಕುಡಿವೆಂ ಕ್ಷಣದಲಿ ರಮ್ಮ ನಾನ್


ದಾರಿ ಉದ್ದಕ್ಕೂ ಮನಸ್ಸು ಬೇಡಾ... ಬೇಡಾ... ಅನ್ನುತ್ತಿತ್ತು... ಆದರೆ ದೈವೇಚ್ಛೆಯನ್ನು ತಡೆಯಲು ನಾವ್ಯಾರು...? ಭಕ್ತರಿರುವಲ್ಲಿ ಪರಮಾತ್ಮ... "ಆನಂದೋ ಬ್ರಹ್ಮ ಇತಿ ವಿಜಿಜ್ಞಾಸಾತ್..." ಎನ್ನುವಂತೆ, ಜೀವಾತ್ಮ ಮತ್ತು ಪರಮಾತ್ಮದ ಸಮ್ಮಿಲನವೇ ಆನಂದ... ನನ್ನೊಳಗಿನ ಜೀವಾತ್ಮ, ಬಾಟ್ಳಿಯೊಳಗಿನ ಪರಮಾತ್ಮದಲ್ಲಿ ವಿಲೀನವಾಗಲು ಹಾತೊರೆಯುತ್ತಿತ್ತು... ಬೇಡಾ... ಬೇಡಾ... ಅಂದರೂ ಒಂದು ಬಾರ್ ಬಳಿ ನಿಲ್ಲಿಸಿದೆ... ವಿದ್ಯೆ, ವಿನಯ, ಸದ್ಬುದ್ಧಿ ಎಲ್ಲವನ್ನೂ ತನ್ನ ಇಷ್ಟಪುತ್ರರಿಗೆ ಕರ್ಮಾನುಸಾರ ದೊರಕಿಸಿಕೊಡುವ ಸರಸ್ವತಿಯ ಗಂಡನಾದ ಬ್ರಹ್ಮನ ಮೇಲಿನ ಸ್ಥುತಿ, "ಬ್ರಹ್ಮಾ ನಿಂಗೆ ಜೋಡಸ್ತೀನಿ..." ಅನ್ನೋ ಹಾಡು ರೇಡಿಯೋದಲ್ಲಿ ಬರಲಾರಂಭಿಸಿದಾಗ, ಹೆಂಡವನ್ನು ಮುಟ್ಟಿದ ಒಬ್ಬ ಸರ್ವರ್ನ ಕೈಗಳು ವಾಲ್ಯೂಮನ್ನು ಏರಿಸಿತು... ಒಳಗೆ ಹೋಗಿ ಹಳೇ ಸನ್ಯಾಸಿಯ ಪಾದಕ್ಕೆ ಎರುಗಿ ಆ ಮುಕ್ಕಾಲುವಾಸಿ ವಿಷ ಮತ್ತು ಕಾಲುವಾಸಿ ಅಮೃತವನ್ನು ಮುಕ್ಕಾಲುವಾಸಿ ಖಾಲಿ ಆಗುವವರೆಗೂ ಕುಡಿದೆ... ಮಧ್ಯೆ ಮಧ್ಯೆ ಲೈಟರ್ನ ದೀಪದಿಂದ ಸಿಗರೇಟಿನ ಧೂಪ ಹತ್ತಿಸಿ, ಉಪ್ಪಿನಕಾಯಿ, ಕಡಲೇಬೀಜಗಳ ನೈವೇದ್ಯವನ್ನು ನನ್ನನ್ನಾವರಿಸಿದ ಪರಮಾತ್ಮಕ್ಕೆ ನೈವೇದ್ಯ ಮಾಡುತ್ತಾ, ನಿಲ್ಲಲೂ ಆಗದೆ... ಕೂಡಲೂ ಆಗದಿರುವ ಆ ಸಮಯದಲ್ಲಿ ಬೈಕು ಏರಿ ನನ್ನ ಪ್ರಯಾಣ ಬೆಳೆಸಿದೆ... ಭೃಂಗದ ಬೆನ್ನೇರಿ... ಎಂಬ ಪದ... ಹಾಗೇ ತಲೆಯಲ್ಲಿ ಎಂದೂ ಬೇಯದ ದೋಸೆಯಂತೆ ಮಗುಚಾಕಿಕೊಂಡೇ ಇತ್ತು... "ಆಹಾ... ಭೃಂಗದ ಬೆನ್ನೇರಿ... ಎಂಥಾ ಕವಿತಾ ವಿಲಾಸ..." ಭೃಂಗದ ಬೆನ್ನನ್ನೇರುವುದು ಅಂದರೇನು... ಅದನ್ನು ಸವಾರಿ ಮಾಡುವುದು ಅಂದರೇನು... ರವಿ ಕಾಣದನ್ನು ಕವಿ ಕಾಣುತ್ತಾನೆ,,, ಆದರೆ ಕವಿಯೂ ಕಾಣದ್ದನ್ನು ಕುಡುಕ ಕಾಣುತ್ತಾನೆ... ನಾನು ಓಡಿಸುತ್ತಿದ್ದ ಬುಲೆಟ್ ನನಗೆ ಆ ಅನುಭವವನ್ನು ಕೊಡಲು ಪ್ರಾರಂಭಿಸಿತು... ನೋಡ ನೋಡುತ್ತಿದ್ದಂತೆಯೇ ಮನೆಯು ಬಂದೇಬಿಟ್ಟಿತು... ಅರೆ ಹೊಟ್ಟೆ ತಿಂದ ಹೊಟ್ಟೆ, ಟೈಟಾಗಲು ಸಾಕಾಗದಷ್ಟು ಎಣ್ಣೆ... ಮಜ ಇನ್ನೇನು ಸಿಗುತ್ತಿದೆ ಅನ್ನುವಾಗ ಮುಗಿದು ಹೋಗುವ ಪ್ರಯಾಣ... ಇವೆಲ್ಲವೂ ಶೂನ್ಯಕ್ಕೆ ಸಮಾನ... ಪೂರ್ಣತೆಯಲ್ಲಿ ಮಾತ್ರ ಸಂತೃಪ್ತಿ ಇರುತ್ತದೆ... ನ್ಯೂನ್ಯತೆಯಲ್ಲಿ ಶೂನ್ಯ ಮಾತ್ರವಿರುತ್ತದೆ... ಇನ್ನು ನಾನು ಗಾಡಿ ನಿಲ್ಲಿಸಲಾಗುವುದಿಲ್ಲಾ... ಒಂದೇ ಸಮನೇ ಗಾಡಿಯನ್ನು ಮೈಸೂರಿನ ಕಡೆಗೆ ತಿರುಗಿಸಿದೆ... ಆದರೆ ಅದೇಕೋ ಗೊತ್ತಿಲ್ಲ... ಮಾರನೆಯ ಮಧ್ಯಾಹ್ನ ಹೋಟಲ್ ರೂಮಿನಲ್ಲಿ ಎಚ್ಚರವಾದಾಗ ನಾನು ಕೊಯಂಬತ್ತೂರಿನಲ್ಲಿದ್ದೆ.

ಸೋಮವಾರ, ಫೆಬ್ರವರಿ 29, 2016


ಮದ್ಯೆಯ ಮಂದಿರದಲ್ಲಿ ಮದಿರೆ ಹೀರುತ್ತಾ ಮಧ್ಯೆ ಮಧ್ಯೆ ಸಿಗರೇಟಿನ ಧೂಮ ಸೇವಿಸುತ್ತಾ ಪಬ್ಬಲ್ಲಿ ರವಿಚಂದ್ರನ್ ಅಲ್ಲದ ಏಕಾಂಗಿಯಾಗಿ ಕುಳಿತಿದ್ದೆಬೇಸರ, ಮನಸ್ಸು ಭಾರ, ವಿಧಿಯ ವಿಕಾರ, ಸೃಷ್ಟಿಯ ಚಮತ್ಕಾರಎಲ್ಲದರ ಬಗ್ಗೆ ಐಪಿಲ್ ಮ್ಯಾಚನ್ನು ಸೀಟಲ್ಲೇ ಫಿಕ್ಸಾಗಿ ನೋಡಿಕೊಂಡು ಮಂಥಿಸುತ್ತಿದ್ದೆಅನ್ಯರ ದ್ರವ್ಯದ ಆಶ್ರಯದಲ್ಲಿ ಬದುಕುತ್ತಾ ದ್ರವ್ಯ ಹೀರುತ್ತಿದ್ದರ ಬಗ್ಗೆ ಹೇಸಿಗೆಅದರ ಬಗ್ಗೆ ಪ್ರಯತ್ನ ಪಟ್ಟರೂ ಏನೂ ಕಿಸಿಯಲಾಗದೆ ನಾಚಿಕೆಸಿಕ್ಕದ ದ್ರಾಕ್ಷಿಯ ನಿಜವಾದ ರುಚಿ ಹುಳಿಯಲ್ಲ, ಕಹಿ ಎಂಬ ಹೊಸತಾಗಿ ಸಾಕ್ಷಾತ್ಕಾರಗೊಂಡಿದ್ದ ಜ್ಞಾನಕಿತ್ತು ಹೋದ ಕವನಗಳುಕದ್ದು ಕೆರೆದ ಕವಿತೆಗಳುಚಿತ್ರ-ವಿಚಿತ್ರ ರೀತಿಯ ಸಿನಿಮಾಗಳು ಮಾಡುವ ಕನಸುಗಳುಮನಸ್ಸಿನಲ್ಲೇ ಪಂಚ್ ಡೈಲಾಗ್ ಹೊಳಹುಗಳುಏತನ್ಮಧ್ಯೆ ನನ್ನ ಜೀವನ ಎಂಬ ಸಿನಿಮಾದ ಸ್ಕ್ರಿಪ್ಟ್ನ ಒನ್ಲೈನ್ ವರ್ಶನ್ ಕೂಡ ರೆಡಿಯಾಗಿರಲಿಲ್ಲ ಖಾಲೀ ಹಾಳೆಯಲ್ಲಿ ಏನು ಬರೆಯುವುದೋಏನು ಬರೆಯದೆಯಿರುವುದೋ ತಿಳಿಯದ ಕನ್ಫೂಶನ್ ಹೊತ್ತ ಕಣ್ಣುಗಳು ಎದುರು ಡ್ಯಾನ್ಸ್ ಫ್ಲೋರ್ನಲ್ಲಿ ಹೆಜ್ಜೆ ಹಾಕುತ್ತಾ ನನ್ನನ್ನೇ ಸೈಟ್ ಹಾಕುತ್ತಿರುವ ಹುಡುಗಿಯತ್ತ ಬಿದ್ದವುಜೀವನದ ಸಿನಿಮಾನಲ್ಲಿ ಹೀರೋ ಆಗದೆ ಗ್ರಹಚಾರ ಕೆಟ್ಟು ಸೈಡ್ ವಿಂಗ್ನಲ್ಲಿ ಟೊರಿನೋ ಕುಡಿಯುತ್ತಿರುವ ಜೂನಿಯರ್ ಆರ್ಟಿಸ್ಟ್ ನಾನುಬಲವಂತವಾಗಿ ಎರಡು ಕ್ವಾರ್ಟರ್ ಓಲ್ಡ್ ಮಾಂಕ್ ಕುಡಿದು ಗೋಡೆ ಹಿಡಿದು ಆಮ್ಲೇಟ್ ಹಾಕುವ ಬುದ್ಧಿಜೀವಿ ನಾನುಎಂದು ವ್ಯಥೆ ಪಟ್ಟೆತಪ್ಪು ಎಲ್ಲಾಯಿತು…? ಸರ್ವವನ್ನೂ ಅರಿತಎಲ್ಲಾ ಸಮಸ್ಯೆಗಳಿಗೂ ಉತ್ತರ ರೆಡಿ ಮಾಡಿಕೊಂಡಿರುವ, ರೆಡಿ ಮಾಡಿಕೊಡುವ ಬಾರ್ ಟೆಂಡರ್ ನನ್ನ ಕಷ್ಟ ನೋಡಲಾಗದೆ ಒಂದಷ್ಟು ಬ್ರಾಂಡ್ಗಳನ್ನು ಗೊಟಾಯಿಸಿ ಕಲಗಚ್ಚು ಮಾಡಿಕೊಟ್ಟ… “ಇದಕ್ಕೆ ಕಾಕ್-ಟೇಲ್ ಅಂತಾರೆಅದೇ ಜನ ಸರ್ವ ರೋಗಕ್ಕೂ ಸಾರಾಯೇ ಮದ್ದು ಅಂತಾನೂ ಅಂತಾರೆನಿಮಗೆ ಬೇಕಾದ ಉತ್ತರ ಇದರಿಂದ ಸಿಗತ್ತೆ…” ಎಂದು ಗ್ಲಾಸನ್ನು ಕೈಗೆ ಇಟ್ಟನುಬೇಸಿಕ್ ಐಡಿಯಾದಲ್ಲೇ ಫಾಲ್ಟ್ ಹೊಡೆದಿದ್ದರಿಂದ ಜೀವನ ರೀತಿ ಹಾಲ್ಟ್ ಆಗಿದೆ ಅಂತ ಒಳಗಿರುವ ಪರಮಾತ್ಮ ಥಟ್ಟನೆ ಉತ್ತರ ಕೊಟ್ಟ… “ಅರ್ಥ ಆಗಲಿಲ್ಲ ಒಸಿ ಡೀಟೇಲ್ ಆಗಿ ಹೇಳಿ ಶಿವ…” ಅಂದೆತಕ್ಷಣ… “ಪ್ರಿಯತಮಾ ನಾನು ನಿನ್ನ ಆಶೀರ್ವಾದದಿಂದ ಗರ್ಭವತಿಯಾಗಿದ್ದೇನೆಪ್ರಿಯತಮಾ…” ಎಂದು ಪರಮಾತ್ಮ ಜಗ್ಗೇಶಿನ ಅವತಾರದಲ್ಲಿ ಸ್ಟೇಜಿನ ಮೇಲೆ ನಿಂತು ಕಿರುಚಿದ… “ಯಾಕೇ ಅಷ್ಟು ಜೋರಾಗಿ ಕಿರಚ್ತೀಯಬೇರೆಯವರು ಏನ್ ಅಂದ್ಕೊಳಲ್ಲಾ…” ಎಂದು ಸೂಕ್ಷ್ಮವಾಗಿ ಹೇಳಿದೆ… “ಹೀಗೆ ಕಿರುಚಿದರೇನೇ ಸಭಿಕರಿಗೆ ಕೇಳಿಸೋದೋ, ರಾಗಿ ಮಿಶೀನ್ ಮಂಜ…” ಎಂಬ ರಿಪ್ಲೈ ಬಂತುಆಗ ಹೊಳೆಯಿತುಜೀವನ ಸಿನಿಮಾ ಅಲ್ಲನಾಟಕಅದರಲ್ಲಿ ನಾವು ಜೋರಾಗಿ ಡೈಲಾಗ್ ಡೆಲಿವರಿ ಮಾಡಿದಷ್ಟೂ ನಮಗೆ ಬೆಲೆ ಮಾತಾಡು ಸಾಕು, ಮೌನ ಬಿಸಾಕು, ಹೋರಾಡುವ ಧಮ್ ಇದೆ, ಹುಡುಕಾಡುವ ದಿಲ್ ಇದೆಎದುರು ಅದೇ ಡ್ಯಾನ್ಸ್ ಫ್ಲೋರ್ನಲ್ಲಿ ಅದೇ ಫಿಗರ್ ನನ್ನನ್ನ ಸೈಟ್ ಹಾಕಿ ಸ್ಮೈಲ್ ಕೊಡ್ತಾನೇ ಇದೆಎಲ್ಲರ ಗಮನ ತನ್ನ ಕಡೆ ಟರ್ನ್ ಮಾಡುತ್ತಾ ಟರ್ನ್ ಟೇಬಲ್ ಒಮ್ಮೆ ಕೆರೆದು ಡೀಜೆ ಒಮ್ಮೆ ಕಿರುಚಿದಹಾಡು ಶುರುವಾಗುತ್ತಿದ್ದಂತೆಯೆ ತನ್ನ ಗೆಳತಿಯರೆಲ್ಲಾ ಅವರವರ ಡವ್ಗಳ ಜೊತೆ ರೊಮ್ಯಾಂಟಿಕ್ಕಾಗಿ ಡ್ಯಾನ್ಸ್ ಮಾಡುತ್ತಾ ಮಜ ತೆಗೆದುಕೊಳ್ಳುತ್ತಿರುವುದು ಕಂಡು ಮಮ್ಮಲ ಮರುಗುತ್ತಿದ್ದ ಫಿಗರ್ ನೋಡಿದೆಲವರ್ಗಳಿಲ್ಲದವರಿಗೆ ಮಾತ್ರ ಗೊತ್ತು ವಿರಹದ ನೋವುಸೀದಾ ಅವಳ ಬಳಿ ಹೋಗಿ ಡ್ಯಾನ್ಸ್ ಮಾಡುವಂತೆ ಸಜ್ಞೆ ಮಾಡಿದೆಮೌನ ಮಾತಾಗಿ, ಭಾವನೆಗಳು ಡ್ಯಾನ್ಸಿನ ಸ್ಟೆಪ್ಪಾಗಿ ಹಾಡು ಮುಗಿಯುವ ತನಕ, ಒಲವು ಭೋರ್ಗರೆಯುವ ನದಿಯಾಗಿ ಹಾಡು ಮುಗಿಯುವವರೆಗೂ ಹರಿಯಿತುಅವಳನ್ನ ಬೀಳ್ಕೊಟ್ಟು, ಪಟ್ಟ ಸಂತೋಷಕ್ಕೆ ಸರಿಯಾದ ಬಿಲ್ ಕೊಟ್ಟು, ಬಾರ್-ಟೆಂಡರ್ ಕೈಯಲ್ಲಿ ಮತ್ತು ಆಚೆ ಸಲಾಮು ಹೊಡೆದ ಮೀಸೆ ಮಾಮನ ಟೋಪಿಯಲ್ಲಿ ಟಿಪ್ಸ್ ಇಟ್ಟು, ಎಲ್ಲೂ ಎಡವದೇ ಜೋಪಾನವಾಗಿ ಸುಂಕವಿಲ್ಲದ ಅದೇ ದಾರಿ ಹಿಡಿದು ಮನೆ ಸೇರಿ ಗುಬ್ರಾಕಿಕೊಂಡು ಮಲಗಿದೆ